

25th February 2026

ಬೈಲಹೊಂಗಲ - ಸಮೀಪದ ಇಂಚಲ ಗ್ರಾಮದಲ್ಲಿ ಜಿಲ್ಲಾ ಪಂಚಾಯತಿ ಬೆಳಗಾವಿ ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರು ಇಂದು ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ಇಂಚಲ ಬಿ ಸಿ ಡಬ್ಲ್ಯೂ ಡಿ 1642 ಇದರ ನೂತನ ಕಟ್ಟಡ ಪೂಜಾ ಕಾರ್ಯಕ್ರಮವನ್ನು ರಿಬ್ಬನ್ ಕಟ್ ಮಾಡುವುದರ ಮೂಲಕ ಉದ್ಘಾಟನೆ ಮಾಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಪೂರ್ಣಾನಂದ ಭಾರತಿ ಸ್ವಾಮೀಜಿಗಳು ಇಂಚಲ ಶ್ರೀ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿಗಳು ಇವರು ವಹಿಸಿದ್ದರು. ಹಾಗೂ ಬೈಲಹೊಂಗಲ ಜನಪ್ರಿಯ ಶಾಸಕರಾದ ಮಹಾಂತೇಶ ಶಿ. ಕೌಜಲಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಹಾಸ್ಟೆಲ ಕಟ್ಟಡ ಸುಂದರವಾಗಿ ಸುಸರ್ಜಿತವಾಗಿ ಹಾಗೂ ವಾತಾವರಣ ಅತ್ಯುತ್ತಮವಾಗಿದೆ ಇದು ನಿಮಗೆ ಒಂದು ದೇವಸ್ಥಾನ ಇದ್ದಹಾಗೆ ಇದನ್ನು ಎಷ್ಟು ನೀವು ಸ್ವಚ್ಛವಾಗಿ ಇಟ್ಟುಕೊಳ್ಳುತ್ತೀರೋ ಅಷ್ಟು ನಿಮಗೆ ಮುಂದೆ ಒಂದು ಒಳ್ಳೆಯ ಶಿಕ್ಷಣ ಉದ್ಯೋಗ ಸಿಗುತ್ತದೆ ಮುಂಬರುವ ದಿನಗಳಲ್ಲಿ ಇನ್ನೂ ಅತಿ ಹೆಚ್ಚಿನ ಕೆಲಸವನ್ನು ಮಾಡಿ ಕೊಡುತ್ತೇನೆ ಎಂದು ಶಾಸಕರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಮಾಜಿ ಪುರಸಭೆಯ ಅಧ್ಯಕ್ಷರು ಶ್ರೀ ರಾಜು ಜನ್ಮಟ್ಟಿ ಸಿ ಎಸ್ ರಾಯನಾಯ್ಕರ ಪಿಕೆಪಿಎಸ್ ಅಧ್ಯಕ್ಷರು ಇಂಚಲ. ಗ್ರಾಮದ ಹಿರಿಯರಾದಂತ ಬಸಪ್ಪ ಮಲ್ಲೂರ. ಅನಿಲ್ ಎಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು CDPO ಬೈಲಹೊಂಗಲ ಆರೋಗ್ಯ ಅಧಿಕಾರಿಗಳು PHC ಇಂಚಲ ಅಧ್ಯಕ್ಷತೆಯನ್ನು ಎಂ ಚಿನಗುಡಿ ತಾಲೂಕ ಕಲ್ಯಾಣ ಅಧಿಕಾರಿಗಳು ಹಿಂದುಳಿದ ವರ್ಗಗಳ ಇಲಾಖೆ ಬೈಲಹೊಂಗಲ ಕಟ್ಟಡದ ಗುತ್ತಿಗೆದಾರರು ಶ್ರೀ ಶಿವಾನಂದ್ ಕಾಗತಿಕರ
ನಿಲಯದ ಪಾಲಕರು ಶ್ರೀ ಎಸ್ ಜಿ ಸಿಂಗಾರಗೂಪ್ಪ ಕಾರ್ಯಕ್ರಮ ನಿರೂಪಣೆಯನ್ನು ಶ್ರೀ ಪಿ ಎಫ್ ಗುಮ್ಮಗೋಳ ವಂದನಾರ್ಪಣೆಯನ್ನು ಎಮ್ ಎ ತಹಶೀಲ್ದಾರ್. ಇಂಚಲ ಗ್ರಾಮದ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಮಲ್ಲಪ್ಪ ಹಾರೋಗೊಪ್ಪ ಗ್ರಾಮ ಪಂಚಾಯತಿಯ ಸದಸ್ಯರಾದ ಮುನೀರ ಮಿರ್ಜನ್ನವರ್, ಶಿವಪ್ಪ ಜಕಾತಿ, ಮುದುಕಪ್ಪ ಕರಾಡಿ ಮತ್ತು ಗ್ರಾಮದ ಗುರುಹಿರಿಯರು ಸವದತ್ತಿ ಹಾಗೂ ಬೈಲಹೊಂಗಲ ತಾಲೂಕಿನ ನಿಲಯ ಪಾಲಕರ/ನಿಲಯ ಮೇಲ್ವಿಚಾರಕರು, ಹಾಸ್ಟೆಲಿನ ವಿದ್ಯಾರ್ಥಿಗಳು ಅಡುಗೆಯವರು ಅಡುಗೆ ಸಹಾಯಕರು ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವರದಿ- ಬಸವರಾಜ ಲಕ್ಕನ್ನವರ ಬೈಲಹೊಂಗಲ
undefined

ಜಿಲ್ಲಾಧಿಕಾರಿಗಳ ಸೂಚನೆಗೆ ಎಚ್ಚೆತ್ತ ಅರಣ್ಯಾಧಿಕಾರಿಗಳು- ಸಾಣಾಪುರ ಗ್ರಾಮದ ಅಕ್ರಮ ರೇಸಾರ್ಟ್ ಗಳ ನೆಲಸಮ

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕರಾದ.ವಿಜಯ ಕುಮಾರ ಇವರಿಗೆ ‘ಕನ್ನಡ ಕಟ್ಟಾಳು ವಿಶೇಷ ಪ್ರಶಸ್ತಿ ಪ್ರಧಾನ

ಸಿಬ್ಬಂದಿ ಮತ್ತು ಅವರ ಕುಟುಂಬಗಳನ್ನು ಬೆಂಬಲಿಸಲು ಭಾರತೀಯ ಸೇನೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (ಎಇಎಸ್ಎಲ್)

ಜಂಬಗಿ ಸೂಪರ್ ಸ್ಪೆಷಾಲಿಟಿ ನೇತ್ರ ಸಂಸ್ಥೆ ಹಾಗೂ ಬೆಳಗಾವಿ ಲೇಸರ್ ಮತ್ತು ಕಾಂಟ್ಯಾಕ್ಟ್ ಲೆನ್ಸ್ ಕ್ಲಿನಿಕ್ ಬೆಳಗಾವಿ ಲೋಕಾರ್ಪಣೆ

ಕಾಸರಗೋಡು ಕನ್ನಡ ಭವನದಲ್ಲಿ ಈ 22ಭಾನುವಾರ ನಡೆಯಲಿರುವ "ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಎಡನೀರು ಶ್ರೀಗಳಿಂದ ಬಿಡುಗಡೆ.